
ಆರ್ಸಿಬಿ ತಂಡದ ವೇಗದ ಬೌಲರ್ ಯಶ್ ದಯಾಳ್ ತಮ್ಮ ದೇಶೀಯ ಕ್ರಿಕೆಟ್ ತಂಡವನ್ನು ಉತ್ತರ ಪ್ರದೇಶದಿಂದ ಛತ್ತೀಸ್ಗಢಕ್ಕೆ ಬದಲಾಯಿಸಲು ನಿರ್ಧರಿಸಿದ್ದಾರೆ.
ಐಪಿಎಲ್ 2026ರ ಆವೃತ್ತಿಯಲ್ಲಿ ಆಡದಿರುವುದು ಮತ್ತು ಯುಪಿ ಟಿ20 ಲೀಗ್ನಲ್ಲಿನ ವೈಯಕ್ತಿಕ ಸಮಸ್ಯೆಗಳ ಕಾರಣದಿಂದ ಅವರು ಈ ನಿರ್ಧಾರ ಕೈಗೊಂಡಿದ್ದಾರೆ.
ದಯಾಳ್ ಈಗಾಗಲೇ ಛತ್ತೀಸ್ಗಢದ ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದು, ಮುಂದಿನ ದೇಶೀಯ ಕ್ರಿಕೆಟ್ ಸೀಸನ್ಗಾಗಿ ಸಿದ್ಧತೆ ನಡೆಸುತ್ತಿದ್ದಾರೆ.