
ಜಾರ್ಖಂಡ್‌ನ ದೇವ್‌ಘರ್‌ನಲ್ಲಿ ವಿಚಿತ್ರ ಕಳವು ಪ್ರಕರಣ ವರೆದಿಯಾಗಿದ್ದು, ನಂದನ್ ಪಹಾರ್ ಬಳಿಯ ಎಸ್ಬಿಐ ಎಟಿಎಂ ಕೇಂದ್ರದ ಶಟರ್ ಕತ್ತರಿಸಿ ಹಣ ದೋಚಲು ವಿಫಲವಾದ ಕಳ್ಳರ ಗುಂಪೊಂದು ಇಡೀ ಎಟಿಎಂ ಯಂತ್ರವನ್ನೇ ಕಿತ್ತುಕೊಂಡು ಪರಾರಿಯಾಗಿದೆ.
ಸೋಮವಾರ ರಾತ್ರಿ ನಡೆದ ಈ ಕಳ್ಳತನದ ದೃಶ್ಯಗಳು ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಕಳ್ಳರು ತಮ್ಮ ಕಾರನ್ನು ಬಳಸಿ ಎಟಿಎಂ ಯಂತ್ರವನ್ನು ಕಿತ್ತು ವಾಹನದಲ್ಲಿ ಹೇರಿಕೊಂಡು ಹೋಗುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಈ ಘಟನೆಯ ಕುರಿತು ಸುತ್ತಮುತ್ತಲಿನ ನಿವಾಸಿಗಳಿಗೂ ಯಾವುದೇ ಸುಳಿವು ಸಿಕ್ಕಿರಲಿಲ್ಲವಾದ್ದರಿಂದ, ಪೊಲೀಸರು ಈ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.