
ಕೇರಳದ ವಯನಾಡ್‌ನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕಬಿನಿ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, 4 ಗೇಟ್‌ಗಳನ್ನು ತೆರೆದು ನದಿಗೆ 25,000 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗಿದೆ.
84 ಅಡಿ ಗರಿಷ್ಠ ಸಾಮರ್ಥ್ಯದ ಕಬಿನಿ ಜಲಾಶಯದಲ್ಲಿ ಪ್ರಸ್ತುತ 82 ಅಡಿ ನೀರು ಸಂಗ್ರಹವಾಗಿದ್ದು, ಈ ನೀರು ತಿರುಮಕೂಡಲು ಸಂಗಮದ ಮೂಲಕ ತಮಿಳುನಾಡನ್ನು ಸೇರಲಿದೆ.
ಈ ವರ್ಷ ಮಳೆಯ ಕೊರತೆಯಿಂದ ಖಾಲಿಯಾಗಿದ್ದ ಜಲಾಶಯ ಇದೀಗ ಭರ್ತಿಯಾಗಿದ್ದು, ತಮಿಳುನಾಡಿಗೆ ಕಾವೇರಿ ನೀರು ಹರಿಸುವ ಆದೇಶದ ನಡುವೆಯೇ ನದಿ ಪಾತ್ರಕ್ಕೆ ನೀರನ್ನು ಹರಿಸಲಾಗುತ್ತಿದೆ.