
ಪರವಾನಗಿ ಇಲ್ಲದೆ ಔಷಧ ಸಂಗ್ರಹಿಸುತ್ತಿದ್ದ ಇ-ಕಾಮರ್ಸ್ ಘಟಕಗಳ ಮೇಲೆ ಕರ್ನಾಟಕ FDA ದಾಳಿ ನಡೆಸಿ, 4 ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ಔಷಧಗಳನ್ನು ವಶಪಡಿಸಿಕೊಂಡಿದೆ.
ಔಷಧಗಳ ಎಕ್ಸ್‌ಪೈರಿ, ಮಿಸ್ ಲೇಬಲಿಂಗ್ ಮತ್ತು ಹೆಚ್ಚುವರಿ ದರದ ದೂರುಗಳ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಯುಟಿ ಖಾದರ್ ಸೆಪ್ಟೆಂಬರ್ 08ರಂದು ಸಭೆ ಕರೆದಿದ್ದಾರೆ.
ಇ-ಕಾಮರ್ಸ್ ಮೂಲಕ ನಡೆಯುವ ಅಕ್ರಮ ಔಷಧ ಮಾರಾಟವನ್ನು ತಡೆಗಟ್ಟಲು ಸರ್ಕಾರ ಹೊಸ ನಿಯಮಗಳನ್ನು ಜಾರಿಗೆ ತರಲು ಚಿಂತನೆ ನಡೆಸಿದೆ.