Sports
ನೆಟ್ಟಕಲ್ಲಪ್ಪ ಈಜು ಚಾಂಪಿಯನ್‌ಷಿಪ್: ಕ್ರಿಷ್ ಹಾಗೂ ಲಕ್ಷ್ಯಾ ‘ಶ್ರೇಷ್ಠ ಈಜುಪಟು’ ಗೌರವ

ನೆಟ್ಟಕಲ್ಲಪ್ಪ ಈಜು ಚಾಂಪಿಯನ್‌ಷಿಪ್: ಕ್ರಿಷ್ ಹಾಗೂ ಲಕ್ಷ್ಯಾ ‘ಶ್ರೇಷ್ಠ ಈಜುಪಟು’ ಗೌರವ

prajavani1h
THE BRIEF
1

ಬೆಂಗಳೂರಿನ ಪದ್ಮನಾಭನಗರದ ನೆಟ್ಟಕಲ್ಲಪ್ಪ ಈಜು ಕೇಂದ್ರದಲ್ಲಿ ನಡೆದ 5ನೇ ಆವೃತ್ತಿಯ ನೆಟ್ಟಕಲ್ಲಪ್ಪ ಈಜು ಚಾಂಪಿಯನ್‌ಷಿಪ್ ಮುಕ್ತಾಯಗೊಂಡಿದೆ.

2

ಪುರುಷರ ವಿಭಾಗದಲ್ಲಿ ಬಸವನಗುಡಿ ಅಕ್ವಾಟಿಕ್ ಕೇಂದ್ರದ ಎಸ್. ಕ್ರಿಷ್ ಮತ್ತು ಸಮರ್ಥ್ ಗೌಡ ತಲಾ ನಾಲ್ಕು ಚಿನ್ನದ ಪದಕಗಳನ್ನು ಗೆದ್ದು ಅತ್ಯುತ್ತಮ ಈಜುಪಟು ಪ್ರಶಸ್ತಿಗೆ ಭಾಜನರಾದರು.

3

ಮಹಿಳಾ ವಿಭಾಗದಲ್ಲಿ ಕ್ರಿಷ್ ಅವರ ಸಹೋದರಿ ಎಸ್. ಲಕ್ಷ್ಯಾ ಮತ್ತು ಡಾಲ್ಫಿನ್ಸ್ ಅಕ್ವಾಟಿಕ್ಸ್‌ನ ಮಾನ್ಯಾ ಆರ್. ವಾಧ್ವಾ ತಲಾ ಮೂರು ಚಿನ್ನ ಹಾಗೂ ಒಂದು ಬೆಳ್ಳಿ ಗೆದ್ದು ಜಂಟಿಯಾಗಿ ಶ್ರೇಷ್ಠ ಈಜುಪಟು ಗೌರವ ಪಡೆದರು.