
ಬೆಂಗಳೂರಿನ ಪದ್ಮನಾಭನಗರದ ನೆಟ್ಟಕಲ್ಲಪ್ಪ ಈಜು ಕೇಂದ್ರದಲ್ಲಿ ನಡೆದ 5ನೇ ಆವೃತ್ತಿಯ ನೆಟ್ಟಕಲ್ಲಪ್ಪ ಈಜು ಚಾಂಪಿಯನ್ಷಿಪ್ ಮುಕ್ತಾಯಗೊಂಡಿದೆ.
ಪುರುಷರ ವಿಭಾಗದಲ್ಲಿ ಬಸವನಗುಡಿ ಅಕ್ವಾಟಿಕ್ ಕೇಂದ್ರದ ಎಸ್. ಕ್ರಿಷ್ ಮತ್ತು ಸಮರ್ಥ್ ಗೌಡ ತಲಾ ನಾಲ್ಕು ಚಿನ್ನದ ಪದಕಗಳನ್ನು ಗೆದ್ದು ಅತ್ಯುತ್ತಮ ಈಜುಪಟು ಪ್ರಶಸ್ತಿಗೆ ಭಾಜನರಾದರು.
ಮಹಿಳಾ ವಿಭಾಗದಲ್ಲಿ ಕ್ರಿಷ್ ಅವರ ಸಹೋದರಿ ಎಸ್. ಲಕ್ಷ್ಯಾ ಮತ್ತು ಡಾಲ್ಫಿನ್ಸ್ ಅಕ್ವಾಟಿಕ್ಸ್ನ ಮಾನ್ಯಾ ಆರ್. ವಾಧ್ವಾ ತಲಾ ಮೂರು ಚಿನ್ನ ಹಾಗೂ ಒಂದು ಬೆಳ್ಳಿ ಗೆದ್ದು ಜಂಟಿಯಾಗಿ ಶ್ರೇಷ್ಠ ಈಜುಪಟು ಗೌರವ ಪಡೆದರು.