
ಫ್ಲೈದುಬೈ ವಿಮಾನದಲ್ಲಿ ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಮೇಲೆ ಸಹ-ಪೈಲಟ್ ಹಮಾಮ್ ಅಲ್-ಹಮ್ಮಾಮಿ ದಾಳಿ ನಡೆಸಿ, ಬೆನ್ ಗುರಿಯನ್ ವಿಮಾನ ನಿಲ್ದಾಣದ ಬಳಿ ವಿಮಾನ ಅಪ್ಪಳಿಸಲು ಯೋಜಿಸಿದ್ದ.
ಈ ದಾಳಿಯನ್ನು ಜುಲೈನಲ್ಲೇ ನಡೆಸಲು ಆತ ಉದ್ದೇಶಿಸಿದ್ದರೂ, ಆ ವಿಮಾನದಲ್ಲಿ ತನ್ನ ಗೆಳೆಯನಿದ್ದ ಕಾರಣ ಕೊನೇ ಕ್ಷಣದಲ್ಲಿ ಯೋಜನೆಯನ್ನು ಮುಂದೂಡಿದ್ದ ಎಂದು ತನಿಖಾಧಿಕಾರಿಗಳಿಗೆ ತಿಳಿಸಿದ್ದಾನೆ.
ದಾಳಿಯ ವೇಳೆ ವಿಮಾನವು ಕೆಲವೇ ಕ್ಷಣಗಳಲ್ಲಿ ಸುಮಾರು 16,000 ಅಡಿ ಎತ್ತರ ಕಳೆದುಕೊಂಡಿದ್ದು, ಆಫ್-ಡ್ಯೂಟಿ ಪೈಲಟ್‌ಗಳು ನಿಯಂತ್ರಣ ಪಡೆದು ಸೌದಿ ಅರೇಬಿಯಾದ ತಬೂಕ್‌ನಲ್ಲಿ ಸುರಕ್ಷಿತವಾಗಿ ಇಳಿಸಿದರು.