
ರಾಜ್ಯ ಸಚಿವ ಸಂಪುಟವು ರೈತರಿಗಾಗಿ 493 ಕೋಟಿ ರೂ. ವೆಚ್ಚದ 'ತೇಗ ಸಿರಿ ಯೋಜನೆ' ಮತ್ತು 152 ಕೋಟಿ ರೂ. ಅನುದಾನದ 'ಮುಖ್ಯಮಂತ್ರಿ ನೇಗಿಲಯೋಗಿ ಯೋಜನೆ'ಗೆ ಅನುಮೋದನೆ ನೀಡಿದೆ.
ತೇಗ ಸಿರಿ ಯೋಜನೆಯಡಿ ರೈತರಿಗೆ ತೇಗದ ಸಸಿಗಳನ್ನು ವಿತರಿಸಲಾಗುವುದು ಮತ್ತು 15 ವರ್ಷಗಳ ನಂತರ ಮರ ಮಾರಾಟ ಮಾಡಿದಾಗ ಬರುವ ಲಾಭದಲ್ಲಿ 70% ರೈತರಿಗೆ ಸಿಗಲಿದೆ.
ಮುಖ್ಯಮಂತ್ರಿ ನೇಗಿಲಯೋಗಿ ಯೋಜನೆಯಡಿ 3 ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ರೈತರಿಗೆ ಸರ್ಕಾರವೇ ಟ್ರ್ಯಾಕ್ಟರ್ ಬಾಡಿಗೆ ಪಡೆದು ಉಳುಮೆ ಮಾಡಿಕೊಡಲಿದ್ದು, 31 ತಾಲೂಕುಗಳಲ್ಲಿ ಪ್ರಾಯೋಗಿಕವಾಗಿ ಜಾರಿಯಾಗಲಿದೆ.