
ಉತ್ತರ ಪ್ರದೇಶದ ಲಕ್ನೋದಲ್ಲಿ 2027ರ ವಿಧಾನಸಭಾ ಚುನಾವಣೆ ಸಿದ್ಧತೆ ಕುರಿತು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಸಮ್ಮುಖದಲ್ಲೇ ಇಬ್ಬರು ಹಿರಿಯ ನಾಯಕರು ಬಹಿರಂಗವಾಗಿ ಜಗಳವಾಡಿದ್ದಾರೆ.
ಸಭೆಯಲ್ಲಿ ಎಟಾ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಯೋಗೇಂದ್ರ ಸಿಂಗ್ ಯಾದವ್ ಹಾಗೂ ಎಸ್ಪಿ ನಾಯಕ ಮಂಜೀತ್ ಯಾದವ್ ನಡುವೆ ತೀವ್ರ ವಾಗ್ವಾದ ನಡೆದು ಕೀಳು ಮಟ್ಟದ ನಿಂದನೆಗಳು ನಡೆದಿವೆ.
ಈ ಘಟನೆಯಿಂದ ತೀವ್ರ ಅಸಮಾಧಾನಗೊಂಡ ಅಖಿಲೇಶ್ ಯಾದವ್ ಅವರು ನಾಯಕರನ್ನು ಹೊರಹಾಕಿದ್ದು, ತಕ್ಷಣದಿಂದ ಅನ್ವಯವಾಗುವಂತೆ ಎಟಾ ಮತ್ತು ಕಾಸಗಂಜ್ ಜಿಲ್ಲೆಗಳ ಪಕ್ಷದ ಸಂಘಟನಾ ಘಟಕಗಳನ್ನು ವಿಸರ್ಜಿಸಿ ಆದೇಶಿಸಿದ್ದಾರೆ.