
ಭಾರತದ ಮಾಜಿ ವೇಗಿ ಜಹೀರ್ ಖಾನ್ ಅವರು ಲಂಕಾ ಪ್ರೀಮಿಯರ್ ಲೀಗ್ನ 'ಜಾಫ್ನಾ ಕಿಂಗ್ಸ್' ತಂಡದ ಸಹ-ಮಾಲೀಕರಾಗಿ ಸೇರ್ಪಡೆಯಾಗಿದ್ದಾರೆ.
ಸ್ಟಾಕ್ಹೋಮ್ ಮೂಲದ ಆಂಕರ್ ಸ್ಪೋರ್ಟ್ಸ್ ಸಂಸ್ಥೆಯು ತಂಡವನ್ನು ಸ್ವಾಧೀನಪಡಿಸಿಕೊಂಡಿದ್ದು, ಇನ್ನು ಮುಂದೆ ತಂಡವನ್ನು 'ಆಂಕರ್ ಜಾಫ್ನಾ ಕಿಂಗ್ಸ್' ಎಂದು ಕರೆಯಲಾಗುತ್ತದೆ.
ಐದು ಆವೃತ್ತಿಗಳಲ್ಲಿ 4 ಬಾರಿ ಚಾಂಪಿಯನ್ ಆಗಿರುವ ಜಾಫ್ನಾ ಕಿಂಗ್ಸ್ ತಂಡಕ್ಕೆ ಜಹೀರ್ ಖಾನ್ ಅವರ ಅನುಭವ ದೊಡ್ಡ ಬಲ ನೀಡಲಿದೆ ಎಂದು ಎಲ್ಪಿಎಲ್ ನಿರ್ದೇಶಕರು ತಿಳಿಸಿದ್ದಾರೆ.