
ನವದೆಹಲಿಯ ಭಾರತ್ ಮಂಟಪದಲ್ಲಿ ನಡೆಯುತ್ತಿರುವ ಬ್ರಿಕ್ಸ್ ಭಾರತ್ ಇನ್ನೋವೇಟ್ಸ್ ಎಕ್ಸ್ಪೋಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಭೇಟಿ ನೀಡಿ ಯುವ ನಾವೀನ್ಯಕಾರರೊಂದಿಗೆ ಸಂವಾದ ನಡೆಸಿದ್ದಾರೆ.
ದೇಶವನ್ನು ಜಾಗತಿಕ ಸಂಶೋಧನೆ ಮತ್ತು ನಾವೀನ್ಯತೆ ಕೇಂದ್ರವನ್ನಾಗಿ ಮಾಡಲು ಶ್ರಮಿಸುತ್ತಿರುವ ಯುವಕರನ್ನು ಮತ್ತು ಆಳವಾದ ತಂತ್ರಜ್ಞಾನದ ನವೋದ್ಯಮಗಳನ್ನು ಅವರು ಅಭಿನಂದಿಸಿದ್ದಾರೆ.
ಶಿಕ್ಷಣ ಸಚಿವಾಲಯದ ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ದೀಪ್ತಿ ಗೌರ್ ಮುಖರ್ಜಿ ಕೂಡ ಭಾಗವಹಿಸಿ, ನವೋದ್ಯಮಗಳು ಎದುರಿಸುತ್ತಿರುವ ಮಾರುಕಟ್ಟೆ ಅಡೆತಡೆಗಳ ಕುರಿತು ಚರ್ಚಿಸಿದ್ದಾರೆ.