
ದಾವಣಗೆರೆ ಹೆದ್ದಾರಿಯಲ್ಲಿ ಕಾರು ಡಿಕ್ಕಿ ಹೊಡೆದು ಗಾಯಗೊಂಡಿದ್ದ ಚಿರತೆಯನ್ನು ರಕ್ಷಿಸಲು ಹೋದ ಅರಣ್ಯ ಇಲಾಖೆ ಅಧಿಕಾರಿಯ ಮೇಲೆ ಚಿರತೆ ಏಕಾಏಕಿ ದಾಳಿ ನಡೆಸಿದೆ.
ಅರಿವಳಿಕೆ ಮದ್ದು ನೀಡಿದ ಬಳಿಕ ಚಿರತೆ ಅಧಿಕಾರಿಯ ಮೇಲೆ ಜಿಗಿದು ನೆಲಕ್ಕೆ ಉರುಳಿಸಿದ್ದು, ಇತರ ಸಿಬ್ಬಂದಿ ಕೋಲುಗಳನ್ನು ಬಳಸಿ ಅಧಿಕಾರಿಯನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.
ಗಾಯಗೊಂಡ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸುರಕ್ಷಿತವಾಗಿ ಸೆರೆಹಿಡಿದು, ಹೆಚ್ಚಿನ ಚಿಕಿತ್ಸೆಗಾಗಿ ಪಶು ಆಸ್ಪತ್ರೆಗೆ ರವಾನಿಸಿದ್ದಾರೆ.