ಬೆಂಗಳೂರಿನ ಕೊಡತಿ ಗ್ರಾಮದ ಕ್ರಿಕೆಟ್ ಮೈದಾನದಲ್ಲಿ ಪತ್ತೆಯಾದ ಯುವಕನ ಕತ್ತರಿಸಿದ ತಲೆ ಪ್ರಕರಣವು ಕೊಲೆಯಲ್ಲ, ರೈಲು ಅಪಘಾತ ಅಥವಾ ಆತ್ಮಹತ್ಯೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಸುಮಾರು 25 ರಿಂದ 30 ವರ್ಷ ವಯಸ್ಸಿನ ವ್ಯಕ್ತಿಯು ರೈಲಿಗೆ ಸಿಲುಕಿದ ರಭಸಕ್ಕೆ ತಲೆ ದೇಹದಿಂದ ಬೇರ್ಪಟ್ಟು ಮೈದಾನಕ್ಕೆ ಬಿದ್ದಿದೆ ಎಂದು ಬೈಯಪ್ಪನಹಳ್ಳಿ ರೈಲ್ವೆ ಪೊಲೀಸರು ತಿಳಿಸಿದ್ದಾರೆ.
ಮೃತ ವ್ಯಕ್ತಿಯ ಗುರುತು ಇನ್ನೂ ಪತ್ತೆಯಾಗಿಲ್ಲ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡಬಾರದು ಎಂದು ಮನವಿ ಮಾಡಲಾಗಿದೆ.