
ಬಿಎಂಟಿಸಿಯಲ್ಲಿ ಬಸ್ಗಳ ಆದಾಯ ಸಂಗ್ರಹ ತೀವ್ರವಾಗಿ ಕುಸಿದಿದ್ದು, ಚಾಲಕರು, ನಿರ್ವಾಹಕರು ಮತ್ತು ಭದ್ರತಾ ಸಿಬ್ಬಂದಿ ಸೇರಿದಂತೆ 27 ಸಾವಿರ ನೌಕರರಿಗೆ ಈ ತಿಂಗಳು ವೇತನ ಸಿಗುವುದು ಅನುಮಾನವಾಗಿದೆ.
27 ಸಾವಿರ ಸಿಬ್ಬಂದಿಗೆ ಪ್ರತಿ ತಿಂಗಳು 102 ಕೋಟಿ ರೂ. ಬೇಕಾಗಿದ್ದು, ಶಕ್ತಿ ಯೋಜನೆಯಿಂದ ಆರ್ಥಿಕ ಸಂಕಷ್ಟ ಎದುರಾಗಿದ್ದು, ಡೀಸೆಲ್ ಕಂಪನಿಗಳಿಗೆ 600 ಕೋಟಿ ರೂ. ಬಾಕಿ ಪಾವತಿಸಬೇಕಿದೆ.
ವೇತನ ಪಾವತಿ ದಿನಾಂಕ ಮುಂದೂಡಿಕೆ ಆಗಬಹುದು ಅಥವಾ ಅರ್ಧ ಸಂಬಳ ನೀಡಬಹುದು ಎಂದು ನೌಕರರ ಸಂಘದ ಮುಖಂಡ ಜಗದೀಶ್ ತಿಳಿಸಿದ್ದು, ಶಕ್ತಿ ಯೋಜನೆಯ 6,500 ಕೋಟಿ ರೂ. ಬಾಕಿ ಹಣ ಬಿಡುಗಡೆಗೆ ಆಗ್ರಹಿಸಿದ್ದಾರೆ.