Health & Environment
ನೇಪಾಳದಲ್ಲಿ ಭೀಕರ ಪ್ರವಾಹ: ಮೃತರ ಸಂಖ್ಯೆ 1,365ಕ್ಕೆ ಏರಿಕೆ, 5,326 ಮಂದಿ ನಾಪತ್ತೆ

ನೇಪಾಳದಲ್ಲಿ ಭೀಕರ ಪ್ರವಾಹ: ಮೃತರ ಸಂಖ್ಯೆ 1,365ಕ್ಕೆ ಏರಿಕೆ, 5,326 ಮಂದಿ ನಾಪತ್ತೆ

prajavani54m
THE BRIEF
1

ನೇಪಾಳದಲ್ಲಿ ಸಂಭವಿಸಿದ್ದ ಭೀಕರ ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ ಬುಧವಾರ 1,365ಕ್ಕೆ ಏರಿಕೆಯಾಗಿದ್ದು, 589 ವಿದೇಶಿಗರು ಸೇರಿದಂತೆ 5,326 ಜನರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.

2

ಈವರೆಗೆ 102 ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದ್ದು, ಗುರುತು ಪತ್ತೆಯಾಗದ 1,147 ಮೃತದೇಹಗಳನ್ನು ಹೂಳಲಾಗಿದೆ ಎಂದು ನೇಪಾಳ ಪೊಲೀಸ್‌ ಪ್ರಕಟಣೆ ತಿಳಿಸಿದೆ.

3

ಪ್ರವಾಹದ ಆರ್ಥಿಕ ಪರಿಣಾಮ ಮತ್ತು ಹವಾಮಾನ ಬದಲಾವಣೆ ನಿಯಂತ್ರಣಕ್ಕೆ ಸಂಬಂಧಿಸಿ ಅಧ್ಯಯನ ನಡೆಸಲು ಆಡಳಿತರೂಡ ಆರ್‌ಎಸ್‌ಪಿಯ ಶಾಸಕಿ ಸುಶೀಲ ಖಡ್ಕಾ ನೇತೃತ್ವದಲ್ಲಿ ಏಳು ಮಂದಿ ಸದಸ್ಯರ ಸಂಸದೀಯ ಉಪ ಸಮಿತಿಯನ್ನು ಬುಧವಾರ ರಚಿಸಲಾಗಿದ್ದು, ಸೆಪ್ಟೆಂಬರ್ 18ರೊಳಗಾಗಿ ವರದಿ ನೀಡಲು ಸೂಚಿಸಲಾಗಿದೆ.