
ಹುಬ್ಬಳ್ಳಿಯ ಚಿನ್ನಾಭರಣ ವ್ಯಾಪಾರಿಯೊಬ್ಬರಿಗೆ ಬೂದಿ ಮಿಶ್ರಿತ ಮಣ್ಣಿನಲ್ಲಿ ಚಿನ್ನವಿದೆ ಎಂದು ನಂಬಿಸಿ ಹರಿಯಾಣ ಮೂಲದ ಮುಖೇಶ್ ಎಂಬಾತ ₹1.5 ಕೋಟಿ ಮೌಲ್ಯದ ಚಿನ್ನ ಮತ್ತು ನಗದು ಪಡೆದು ವಂಚಿಸಿದ್ದಾನೆ.
ಆರೋಪಿಯು 1 ಕೆಜಿ 375 ಗ್ರಾಂ ಚಿನ್ನಾಭರಣ ಹಾಗೂ ₹24.5 ಲಕ್ಷ ನಗದು ಪಡೆದಿದ್ದು, ನಂತರ ಮಣ್ಣನ್ನು ಸೋಸಿದಾಗ ಚಿನ್ನ ಇಲ್ಲದಿರುವುದು ಬೆಳಕಿಗೆ ಬಂದಿದೆ.
ವ್ಯಾಪಾರಿ ಮಂಟುಕುಮಾರ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿ ಮುಖೇಶ್‌ನ ಪತ್ತೆಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.