
ಹಾವೇರಿಯ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ 5ನೇ ತರಗತಿಯ ವಿದ್ಯಾರ್ಥಿಗಳು ಚಾಲನಾ ಪರವಾನಗಿ ಇದ್ದರೆ ಮಾತ್ರ ದ್ವಿಚಕ್ರ ವಾಹನ ಸ್ಟಾರ್ಟ್ ಆಗುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ.
ಹ್ರಿದಾನ್ ಪವನ ಬಹದ್ದೂರ್ ದೇಸಾಯಿ ಮತ್ತು ಅಥರ್ವ ಬ್ರಹ್ಮೇರಿ ಎಂಬ ವಿದ್ಯಾರ್ಥಿಗಳು ಈ ವಿಶೇಷ ಭದ್ರತಾ ತಂತ್ರಜ್ಞಾನವನ್ನು ನೈಜ ದ್ವಿಚಕ್ರ ವಾಹನಕ್ಕೆ ಅಳವಡಿಸಿ ಯಶಸ್ವಿಯಾಗಿ ಪ್ರದರ್ಶಿಸಿದ್ದಾರೆ.
ಅಪ್ರಾಪ್ತ ವಯಸ್ಕರು ಮತ್ತು ಪರವಾನಗಿ ಇಲ್ಲದವರು ವಾಹನ ಚಲಾಯಿಸುವುದನ್ನು ತಡೆಗಟ್ಟುವ ಉದ್ದೇಶದಿಂದ ಈ ಪ್ರಾಜೆಕ್ಟ್ ಅನ್ನು ಶಿಕ್ಷಕರ ಮಾರ್ಗದರ್ಶನದಲ್ಲಿ ರೂಪಿಸಲಾಗಿದೆ.