
ಯುಪಿಐ ವಹಿವಾಟುಗಳ ಮೇಲೆ ಶುಲ್ಕ ವಿಧಿಸಲಾಗುತ್ತದೆ ಎಂಬ ವದಂತಿಗಳನ್ನು ಪೇಮೆಂಟ್ಸ್ ಕೌನ್ಸಿಲ್ ಆಫ್ ಇಂಡಿಯಾ ತಳ್ಳಿಹಾಕಿದ್ದು, ಗ್ರಾಹಕರಿಗೆ ಸೇವೆ ಉಚಿತವಾಗಿ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದೆ.
2016ರಲ್ಲಿ ಪ್ರಾರಂಭವಾದಾಗಿನಿಂದಲೂ ಯುಪಿಐ ಗ್ರಾಹಕರಿಗೆ ಉಚಿತವಾಗಿದ್ದು, ಸಣ್ಣ ವ್ಯಾಪಾರಿಗಳು ಯಾವುದೇ ಎಂಡಿಆರ್ (MDR) ಶುಲ್ಕ ಪಾವತಿಸುವ ಅಗತ್ಯವಿಲ್ಲ ಎಂದು ತಿಳಿಸಲಾಗಿದೆ.
ಯುಪಿಐ ಮೂಲಸೌಕರ್ಯದ ನಿರ್ವಹಣೆ ಮತ್ತು ಸೈಬರ್ ಭದ್ರತೆಗಾಗಿ ಬ್ಯಾಂಕ್ಗಳು ಹಾಗೂ ಪಾವತಿ ಕಂಪನಿಗಳು ನಿರಂತರ ಹೂಡಿಕೆ ಮಾಡುತ್ತಿದ್ದು, ಗ್ರಾಹಕರ ಹಿತಾಸಕ್ತಿಯನ್ನು ರಕ್ಷಿಸಲಾಗುತ್ತಿದೆ.