
ಕೆಎಸ್‌ಆರ್‌ಟಿಸಿಯ ಕೆಲವು ಘಟಕಗಳ ಬಸ್‌ಗಳಲ್ಲಿ ಸರ್ವರ್ ತಾಂತ್ರಿಕ ದೋಷದಿಂದಾಗಿ ಯುಪಿಐ ಮೂಲಕ ಟಿಕೆಟ್ ದರ ಪಾವತಿಸುವ ವ್ಯವಸ್ಥೆಯನ್ನು ಮುಂದಿನ ಆದೇಶದವರೆಗೆ ಸ್ಥಗಿತಗೊಳಿಸಲಾಗಿದೆ.
ಮೈಸೂರು ಭಾಗದ ಕೆಲವು ಘಟಕಗಳಲ್ಲಿ ಈ ಸಮಸ್ಯೆ ಕಂಡುಬಂದಿದ್ದು, ಪ್ರಯಾಣಿಕರು ಟಿಕೆಟ್ ಹಣ ಪಾವತಿಸಲು ನಗದು ಹಣವನ್ನು ಕೈಯಲ್ಲಿ ಇಟ್ಟುಕೊಳ್ಳುವಂತೆ ನಿರ್ವಾಹಕರಿಗೆ ಸೂಚನೆ ನೀಡಲಾಗಿದೆ.
ತಾಂತ್ರಿಕ ದೋಷವನ್ನು ಸರಿಪಡಿಸಿದ ನಂತರ ಯುಪಿಐ ಪಾವತಿ ಸೇವೆಯನ್ನು ಮತ್ತೆ ಆರಂಭಿಸಲಾಗುವುದು ಎಂದು ನಿಗಮದ ಮೂಲಗಳು ತಿಳಿಸಿವೆ.