
ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವು ಕೇವಲ ನಕಲು ಮಾಡಬಲ್ಲದೇ ಹೊರತು ಮಾನವನ ನೈಜ ಸೃಜನಶೀಲತೆ ಮತ್ತು ಭಾವನಾತ್ಮಕ ಅನನ್ಯತೆಗೆ ಸರಿಸಾಟಿಯಾಗಲು ಸಾಧ್ಯವಿಲ್ಲ ಎಂದು ಹಿರಿಯ ಕಲಾವಿದ ಎಂ.ಎಸ್. ಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.
ಬುಕ್ ಬ್ರಹ್ಮ ಸಾಹಿತ್ಯ ಉತ್ಸವದ ಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ರಕಲೆ ಆಸಕ್ತರ ಕೊರತೆಯಿಂದ ಬಳಲುತ್ತಿದೆಯೇ ಹೊರತು ಎಐಯಿಂದ ಯಾವುದೇ ಧಕ್ಕೆಯಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಲಲಿತಕಲಾ ಅಕಾಡೆಮಿ ಅಧ್ಯಕ್ಷ ಪ.ಸ.ಕುಮಾರ್ ಅವರು, ಎಐ ನಿಯಂತ್ರಣಕ್ಕೆ ಅಕಾಡೆಮಿಗೆ ಆರ್ಥಿಕ ಶಕ್ತಿ ಇಲ್ಲದಿದ್ದರೂ, ಕಲಾವಿದರು ತಮ್ಮ ಸೃಜನಶೀಲತೆಯನ್ನು ಉಳಿಸಿಕೊಂಡು ಎಐ ವಿರುದ್ಧ ದನಿ ಎತ್ತಬಹುದು ಎಂದು ತಿಳಿಸಿದ್ದಾರೆ.