
ಕೇಂದ್ರ ಚಲನಚಿತ್ರ ಪ್ರಮಾಣಪತ್ರ ಮಂಡಳಿಯು (CBFC) ತನ್ನ ನಿಯಮಗಳಲ್ಲಿ ಮಹತ್ವದ ಬದಲಾವಣೆ ಮಾಡಿದ್ದು, ಕೊನೆ ಕ್ಷಣದಲ್ಲಿ ಸೆನ್ಸಾರ್‌ಗೆ ಅರ್ಜಿ ಸಲ್ಲಿಸುವುದಕ್ಕೆ ಸಂಪೂರ್ಣ ಬ್ರೇಕ್ ಹಾಕಿದೆ.
ಸಿನಿಮಾದ ಸಂಪೂರ್ಣ ಕೆಲಸಗಳು, ಹಿನ್ನೆಲೆ ಸಂಗೀತ, ಧ್ವನಿ, ಗ್ರಾಫಿಕ್ಸ್ ಮತ್ತು ಸಬ್‌ಟೈಟಲ್ಸ್ ಮುಗಿದ ನಂತರವೇ ಪೂರ್ಣ ಆವೃತ್ತಿಯನ್ನು ಪರಿಶೀಲನೆಗೆ ತರಬೇಕು ಎಂದು ಸಿಇಒ ರಾಜೇಂದ್ರ ಸಿಂಗ್ ಆದೇಶಿಸಿದ್ದಾರೆ.
ಅರ್ಧ ಸಂಕಲನವಾದ ಅಥವಾ ರಫ್ ಕಟ್ ಹಾಗೂ ತಾತ್ಕಾಲಿಕ ಸಂಗೀತವಿರುವ ಸಿನಿಮಾಗಳನ್ನು ಬೋರ್ಡ್ ನೇರವಾಗಿ ತಿರಸ್ಕರಿಸಲಿದೆ.