
ಮೈಂಡ್‌ಸ್ಪೇಸ್ ಬ್ಯುಸಿನೆಸ್ ಪಾರ್ಕ್ ರಿಯಲ್ ಎಸ್ಟೇಟ್ ಇನ್ವೆಸ್ಟ್‌ಮೆಂಟ್ ಟ್ರಸ್ಟ್ (REIT) ಜೂನ್ ತ್ರೈಮಾಸಿಕದಲ್ಲಿ ₹788 ಕೋಟಿ ನಿವ್ವಳ ಕಾರ್ಯಾಚರಣೆ ವರಮಾನ ಗಳಿಸಿದೆ.
ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಕಂಪನಿಯ ಆದಾಯದಲ್ಲಿ ಶೇ 28ರಷ್ಟು ಏರಿಕೆಯಾಗಿದ್ದು, ಹೂಡಿಕೆದಾರರಿಗೆ ಪ್ರತಿ ಯೂನಿಟ್‌ಗೆ ₹6.67ರಂತೆ ಒಟ್ಟು ₹442 ಕೋಟಿ ನೀಡಲಾಗುವುದು.
ಈ ಹಂಚಿಕೆಯು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 15.2ರಷ್ಟು ಹೆಚ್ಚಳವಾಗಿದ್ದು, ಈ ಮಾಹಿತಿಯನ್ನು ಮೈಂಡ್‌ಸ್ಪೇಸ್ ಷೇರುಪೇಟೆಗೆ ಅಧಿಕೃತವಾಗಿ ತಿಳಿಸಿದೆ.