
ಮಂಗಳಮುಖಿಯರ ಮನದ ಗೊಂದಲ ಮತ್ತು ನೋವುಗಳನ್ನು ಆಧರಿಸಿದ ‘ಭಾವಾಂತರ’ ಚಲನಚಿತ್ರವು ನವೆಂಬರ್ 6ರಂದು ತೆರೆಕಂಡಿದ್ದು, ಕಾರ್ತಿಕ್ ಶರ್ಮಾ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ.
ನಿರ್ದೇಶಕಿ ಆಗಬೇಕಿರುವ ಕಥಾನಾಯಕಿ ರಾಧಾ ಜೀವನದ ಫ್ಲ್ಯಾಶ್‌ಬ್ಯಾಕ್‌ನಲ್ಲಿ ತನ್ನ ಮಾಜಿ ಪ್ರೇಮಿ ಮಂಗಳಮುಖಿ ಆಗಿರುವುದನ್ನು ತಿಳಿದು ಆಘಾತಗೊಳ್ಳುವ ಕಥಾವಸ್ತುವನ್ನು ಈ ಸಿನಿಮಾ ಹೊಂದಿದೆ.
ತಮಿಳುನಾಡಿನ ಕೂವಗಂನಲ್ಲಿ ನಡೆಯುವ ಲಿಂಗಪರಿವರ್ತಿತರ ಉತ್ಸವದ ಆಚರಣೆಗಳನ್ನು ಚಿತ್ರದಲ್ಲಿ ತೋರಿಸಲಾಗಿದ್ದು, ತನ್ವಿ ರಾವ್ ಮತ್ತು ಕಾರ್ತಿಕ್ ಶರ್ಮಾ ಅಭಿನಯ ಗಮನ ಸೆಳೆಯುತ್ತದೆ.