
ಬೆಂಗಳೂರಿನಲ್ಲಿ ಹಾಲು, ಅಕ್ಕಿ ಸೇರಿದಂತೆ ಕಚ್ಚಾ ವಸ್ತುಗಳ ಬೆಲೆ ಏರಿಕೆಯಿಂದಾಗಿ ಹೋಟೆಲ್ ಉದ್ಯಮದ ಮೇಲೂ ಪರಿಣಾಮ ಬೀರಿದ್ದು, ಹಲವು ಹೋಟೆಲ್ಗಳು ಆಹಾರ ಪದಾರ್ಥಗಳ ದರವನ್ನು ಶೇ 10ರಿಂದ 15ರಷ್ಟು ಹೆಚ್ಚಿಸಿವೆ.
ಕಳೆದ ತಿಂಗಳಲ್ಲಿ ಅಕ್ಕಿ ಬೆಲೆ ಕೆಜಿಗೆ 65 ರಿಂದ 95 ರೂಪಾಯಿವರೆಗೆ ಏರಿಕೆಯಾಗಿದ್ದು, ಬೇಳೆಕಾಳು, ಹಾಲು, ಮೊಸರಿನ ದರವೂ ಹೆಚ್ಚಳವಾಗಿದೆ.
ಕೆಲವು ಹೋಟೆಲ್ಗಳು ಗ್ರಾಹಕರ ಮೇಲಿನ ಹೊರೆ ಕಡಿಮೆ ಮಾಡಲು ಟೀ-ಕಾಫಿ ದರವನ್ನು ಮಾತ್ರ ಹೆಚ್ಚಿಸಿವೆ, ಆದರೆ ಇತರ ಆಹಾರ ಪದಾರ್ಥಗಳ ದರ ಏರಿಕೆಯ ಬಗ್ಗೆ ಮುಂದಿನ ಪರಿಸ್ಥಿತಿಯನ್ನು ಗಮನಿಸಿ ನಿರ್ಧರಿಸುವುದಾಗಿ ತಿಳಿಸಿವೆ.