
ಕೆರಿಬಿಯನ್ ಪ್ರೀಮಿಯರ್ ಲೀಗ್ನ 2ನೇ ಪಂದ್ಯದಲ್ಲಿ ಸೇಂಟ್ ಕಿಟ್ಸ್ ಅ್ಯಂಡ್ ನೆವಿಸ್ ಪೇಟ್ರಿಯಾಟ್ಸ್ ತಂಡವನ್ನು ಮಳೆ ಅಡ್ಡಿಪಡಿಸಿದ ಪಂದ್ಯದಲ್ಲಿ ಟ್ರಿನ್ಬಾಗೊ ನೈಟ್ ರೈಡರ್ಸ್ ತಂಡ ಡಿಎಲ್ಎಸ್ ನಿಯಮದಡಿ ಸೋಲಿಸಿದೆ.
ಮೊದಲು ಬ್ಯಾಟ್ ಮಾಡಿದ ಪೇಟ್ರಿಯಾಟ್ಸ್ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 109 ರನ್ ಗಳಿಸಿದರೆ, ಟ್ರಿನ್ಬಾಗೊ ಪರ ಸುನಿಲ್ ನರೈನ್ 7 ರನ್ ನೀಡಿ 3 ವಿಕೆಟ್ ಪಡೆದರು.
ಪಂದ್ಯ ಸ್ಥಗಿತಗೊಂಡಾಗ ಟ್ರಿನ್ಬಾಗೊ 15 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 94 ರನ್ ಗಳಿಸಿ, ಪಾರ್ ಸ್ಕೋರ್ಗಿಂತ 19 ರನ್ಗಳ ಮುನ್ನಡೆಯಲ್ಲಿದ್ದ ಕಾರಣ ವಿಜೇತರೆಂದು ಘೋಷಿಸಲಾಯಿತು.