
ಬೆಂಗಳೂರಿನಿಂದ ಕೇದಾರನಾಥ ಮತ್ತು ಬದರಿನಾಥಕ್ಕೆ ತೆರಳಿದ್ದ ಸಿಸಿಬಿ ಇನ್ಸ್ಪೆಕ್ಟರ್ ಹಾಗೂ ನಾಲ್ವರು ವಕೀಲರು ಸೇರಿದಂತೆ ಐವರು ಗೆಳೆಯರು ಟ್ರಾನ್ಸ್ ಭಾರತ್ ಏವಿಯೇಷನ್ ಹೆಲಿಕಾಪ್ಟರ್ ಪತನದಲ್ಲಿ ದಾರುಣ ಅಂತ್ಯ ಕಂಡಿದ್ದಾರೆ.
ಬದರಿನಾಥದಿಂದ ಡೆಹ್ರಾಡೂನ್ಗೆ ಮಧ್ಯಾಹ್ನ ಹೊರಟಿದ್ದ ಹೆಲಿಕಾಪ್ಟರ್ ಜೋಶಿಮಠ ಕಣಿವೆಯ ಬಳಿ ಸಂಪರ್ಕ ಕಳೆದುಕೊಂಡಿದ್ದು, ಚಾಯ್ ಮತ್ತು ಥಾಂಗ್ ಗ್ರಾಮದ ಬಳಿ ಅಪಘಾತಕ್ಕೀಡಾಗಿ ಸಂಜೆ 6 ಜನರ ಮೃತದೇಹಗಳು ಪತ್ತೆಯಾಗಿವೆ.
ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ನೀಡಿದ್ದರೂ ಹಾರಾಟ ನಡೆಸಿದ ಹಿನ್ನೆಲೆಯಲ್ಲಿ ಉತ್ತರಾಖಂಡ ನಾಗರಿಕ ವಿಮಾನಯಾನ ಅಭಿವೃದ್ಧಿ ಪ್ರಾಧಿಕಾರವು ಆ ಕಂಪನಿಯ ಸಂಪೂರ್ಣ ಹೆಲಿಕಾಪ್ಟರ್ ಫ್ಲೀಟ್ ಅನ್ನು ಸ್ಥಗಿತಗೊಳಿಸಿದೆ.