
ಮುಂಬೈ ಮೂಲದ ಜಿನಿಯಾ ಚಟರ್ಜಿ ಎಂಬ ಮಹಿಳೆ ವೇಕ್ ಫಿಟ್ ಸಂಸ್ಥೆ ಆಯೋಜಿಸಿದ್ದ ಸ್ಲೀಪ್ ಇಂಟರ್ನ್ಶಿಪ್ ಸ್ಪರ್ಧೆಯಲ್ಲಿ ಸ್ಲೀಪ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಸತತ 60 ದಿನಗಳ ಕಾಲ ಪ್ರತಿದಿನ ಕನಿಷ್ಠ 9 ಗಂಟೆಗಳ ಕಾಲ ನಿದ್ದೆ ಮಾಡಿ, ನೀಡಲಾದ ವಿವಿಧ ವಾರದ ಟಾಸ್ಕ್ ಹಾಗೂ ದಿನಚರಿಯನ್ನು ಯಶಸ್ವಿಯಾಗಿ ಪೂರೈಸಿ ಅವರು ಈ ವಿಜೇತರಾಗಿದ್ದಾರೆ.
ಈ ಸ್ಪರ್ಧೆಯಲ್ಲಿ ವಿಜೇತರಾದ ಜಿನಿಯಾ ಚಟರ್ಜಿ ಅವರಿಗೆ 9.6 ಲಕ್ಷ ರೂಪಾಯಿ ನಗದು ಹಾಗೂ ವೇಕ್ ಫಿಟ್ ಪ್ರಾಯೋಜಿತ ಉಚಿತ ಹಾಲಿಡೇ ಟ್ರಿಪ್ ಬಹುಮಾನವಾಗಿ ಲಭಿಸಿದೆ.