
ಒಬಿಸಿ ಮೀಸಲಾತಿಯ ಕ್ರೀಮಿ ಲೇಯರ್ ವ್ಯಾಪ್ತಿಯನ್ನು ನಿರ್ಧರಿಸುವಾಗ ಪೋಷಕರ ವೇತನ ಮತ್ತು ಕೃಷಿ ಆದಾಯವನ್ನು ಒಟ್ಟು ಆದಾಯದ ಮಿತಿಯಲ್ಲಿ ಸೇರಿಸಬಾರದು ಎಂಬ ಹಳೆಯ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ.
ಈ ನಿಯಮದ ಮರುಪರಿಶೀಲನೆಗೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದ್ದು, ಸರ್ಕಾರದ ವಾದವನ್ನು ಸಂಪೂರ್ಣವಾಗಿ ತಿರಸ್ಕರಿಸಿದೆ.
ಇತರ ಮೂಲಗಳ ಆದಾಯವು 8 ಲಕ್ಷ ರೂ. ನಿಗದಿತ ಮಿತಿಯಲ್ಲಿದ್ದರೆ ಒಬಿಸಿ ನಾನ್-ಕ್ರೀಮಿ ಲೇಯರ್ ಪ್ರಮಾಣಪತ್ರ ಪಡೆದು ಮೀಸಲಾತಿ ಸೌಲಭ್ಯ ಪಡೆಯಲು ಅಭ್ಯರ್ಥಿಗಳು ಅರ್ಹರಾಗಲಿದ್ದಾರೆ.