
ಮುಂದಿನ ಐದು ವರ್ಷಗಳಲ್ಲಿ ₹20 ಸಾವಿರ ಕೋಟಿ ಹೂಡಿಕೆ ಹಾಗೂ 5 ಲಕ್ಷ ಹೊಸ ಉದ್ಯೋಗ ಸೃಷ್ಟಿಸುವ 'ಕರ್ನಾಟಕ ಜವಳಿ ಮತ್ತು ಉಡುಪು ನೀತಿ-2026-31'ಕ್ಕೆ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಈ ಹೊಸ ನೀತಿಯು ಬುಧವಾರದಿಂದ ಜಾರಿಗೆ ಬಂದಿದ್ದು, ಜವಳಿ ಇಲಾಖೆ ಇತಿಹಾಸದಲ್ಲೇ ಮೊದಲ ಬಾರಿಗೆ ಇದರ ಅನುಷ್ಠಾನಕ್ಕೆ ₹4 ಕೋಟಿ ಆರ್ಥಿಕ ಬೆಂಬಲ ನೀಡುವ ಪ್ರಸ್ತಾವಕ್ಕೆ ಅನುಮೋದನೆ ನೀಡಲಾಗಿದೆ.
ಪ್ರಾದೇಶಿಕ ಸಮತೋಲನಕ್ಕಾಗಿ 34 ತಾಲ್ಲೂಕುಗಳನ್ನು ವಿಶೇಷ ಆದ್ಯತೆಯ ತಾಲ್ಲೂಕುಗಳಾಗಿ ಗುರುತಿಸಿದ್ದು, ರೇಷ್ಮೆ ರೀಲಿಂಗ್ ಮತ್ತು ಸ್ಪಿನ್ನಿಂಗ್ ಚಟುವಟಿಕೆಗಳನ್ನು ನೀತಿಯ ವ್ಯಾಪ್ತಿಗೆ ತರಲಾಗಿದೆ.