
ಜಿಗೀಷಾ ಟೇಲರ್ ಮತ್ತು ಅವರ ಪುತ್ರ ಆದಿತ್ಯ ಕಾಪಡಿಯಾ ಅವರು ಐಐಟಿ ಮದ್ರಾಸ್ನ ಆನ್ಲೈನ್ ಡೇಟಾ ಸೈನ್ಸ್ ಕೋರ್ಸ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಒಟ್ಟಿಗೆ ಪದವಿ ಪಡೆದಿದ್ದಾರೆ.
ಮಾಜಿ ಶಿಕ್ಷಕಿಯಾಗಿದ್ದ ಜಿಗೀಷಾ ಅವರು ಕುಟುಂಬದ ಜವಾಬ್ದಾರಿಗಳ ನಡುವೆಯೂ ಓದಿನ ಹಂಬಲದಿಂದ ಈ ಕೋರ್ಸ್ ಸೇರಿದ್ದರು.
ತಾಯಿ ಮತ್ತು ಮಗ ಇಬ್ಬರೂ ಪರಸ್ಪರ ಸಹಾಯ ಮಾಡಿಕೊಳ್ಳುತ್ತಾ, ಆರೋಗ್ಯಕರ ಸ್ಪರ್ಧೆಯೊಂದಿಗೆ ಅಧ್ಯಯನ ನಡೆಸಿ ಈ ಸಾಧನೆ ಮಾಡಿದ್ದಾರೆ.