
ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (TRAI) ವಿವಿಧ ಪ್ರದೇಶಗಳಲ್ಲಿ ಮೊಬೈಲ್ ಮತ್ತು ಬ್ರಾಡ್‌ಬ್ಯಾಂಡ್ ನೆಟ್‌ವರ್ಕ್ ಸಾಮರ್ಥ್ಯವನ್ನು ಪರಿಶೀಲಿಸಲು ನೆಟ್‌ವರ್ಕ್ ಅನುಭವ್ ಎಂಬ ಡಿಜಿಟಲ್ ಪ್ಲಾಟ್‌ಫಾರ್ಮ್ ಪ್ರಾರಂಭಿಸಿದೆ.
ಈ ಜಿಯೋಸ್ಪೇಷಿಯಲ್ ಡ್ಯಾಶ್‌ಬೋರ್ಡ್ ಮೂಲಕ ಗ್ರಾಹಕರು ತಮ್ಮ ಪ್ರದೇಶದ ಇಂಟರ್ನೆಟ್ ವೇಗ ಮತ್ತು ವಿವಿಧ ಟೆಲಿಕಾಂ ಆಪರೇಟರ್‌ಗಳ ಸೇವೆಯನ್ನು ಉಚಿತವಾಗಿ ಹೋಲಿಕೆ ಮಾಡಿಕೊಳ್ಳಬಹುದು.
ಟೆಲಿಕಾಂ ಕಂಪನಿಗಳು ಈ ಪ್ಲಾಟ್‌ಫಾರ್ಮ್‌ನ ದತ್ತಾಂಶವನ್ನು ಬಳಸಿ ತಮ್ಮ ನೆಟ್‌ವರ್ಕ್ ಸಮಸ್ಯೆಗಳಿರುವ ಪ್ರದೇಶಗಳನ್ನು ಗುರುತಿಸಿ ಸೇವೆಯನ್ನು ಸುಧಾರಿಸಲು ಸಹಕಾರಿಯಾಗಲಿದೆ ಎಂದು ಟ್ರಾಯ್ ತಿಳಿಸಿದೆ.