
ಮಹೀಂದ್ರ ಆ್ಯಂಡ್ ಮಹೀಂದ್ರ ಕಂಪನಿಯು ಜೂನ್ ತ್ರೈಮಾಸಿಕದಲ್ಲಿ ₹5,455 ಕೋಟಿ ತೆರಿಗೆ ನಂತರದ ಲಾಭ ಗಳಿಸಿದ್ದು, ಕಳೆದ ವರ್ಷದ ₹4,083 ಕೋಟಿಗೆ ಹೋಲಿಸಿದರೆ ಶೇ 34ರಷ್ಟು ಏರಿಕೆ ಕಂಡಿದೆ.
ಕಂಪನಿಯ ವರಮಾನವು ಶೇ 28ರಷ್ಟು ಏರಿಕೆಯಾಗಿ ₹58,188 ಕೋಟಿಗೆ ತಲುಪಿದ್ದು, ಒಟ್ಟು 3.04 ಲಕ್ಷ ವಾಹನಗಳನ್ನು ಮಾರಾಟ ಮಾಡುವ ಮೂಲಕ ಶೇ 23ರಷ್ಟು ಬೆಳವಣಿಗೆ ದಾಖಲಿಸಿದೆ.
ಮಾರಾಟವಾದ 3.04 ಲಕ್ಷ ವಾಹನಗಳ ಪೈಕಿ 1.75 ಲಕ್ಷ ಎಸ್‌ಯುವಿ ವಾಹನಗಳಾಗಿದ್ದು, ಆಟೊ ಮತ್ತು ಕೃಷಿ ಉಪಕರಣಗಳ ಮಾರಾಟದ ಹೆಚ್ಚಳವು ಈ ಲಾಭಕ್ಕೆ ಪ್ರಮುಖ ಕಾರಣವಾಗಿದೆ.