
ತೆಲಂಗಾಣದ ಜಹೀರಾಬಾದ್ ಬಳಿ ಹೈದರಾಬಾದ್-ಮುಂಬೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ರಾತ್ರಿ ನಡೆದ ಅಪಘಾತದಲ್ಲಿ ಬೀದರ್ ತಾಲ್ಲೂಕಿನ ರಾಜಗೀರಾ ಗ್ರಾಮದ ಆರು ಕೂಲಿ ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆಯಲ್ಲಿ ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಮೆದಕ್ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ; ಮೃತರಲ್ಲಿ ದೇವದಾಸ್ ಮಾರುತಿ, ರೇಖಾ ಸಂಜು, ಶ್ರೀದೇವಿ ಮೊಗಲಪ್ಪ, ಕವಿತಾ ಗುಂಡಪ್ಪ, ರೇಷ್ಮಾ ಶೈಲೇಶ್ ಹಾಗೂ ನಿಖಿತಾ ಸೇರಿದ್ದಾರೆ.
ಸಚಿವ ಈಶ್ವರ ಬಿ. ಖಂಡ್ರೆ ಘಟನೆಗೆ ಸಂತಾಪ ಸೂಚಿಸಿದ್ದು, ಗಾಯಾಳುಗಳ ಚಿಕಿತ್ಸಾ ವೆಚ್ಚ ಭರಿಸಲು ಮತ್ತು ಮೃತದೇಹಗಳ ಮರಣೋತ್ತರ ಪರೀಕ್ಷೆಗೆ ತೆಲಂಗಾಣ ಆಡಳಿತದೊಂದಿಗೆ ಸಂಪರ್ಕದಲ್ಲಿರಲು ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದಾರೆ.