
ಬೆಂಗಳೂರಿನ ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾದ ಯುವತಿ ಮತ್ತು ಆಕೆಯ ತಂಡ ಯುವಕನೊಬ್ಬನನ್ನು ಅಪಹರಿಸಿ 3.7 ಲಕ್ಷ ರೂಪಾಯಿ ಸುಲಿಗೆ ಮಾಡಿದೆ.
ಆಗಸ್ಟ್ 19 ರಂದು ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ಭೇಟಿಯಾದ ಬಳಿಕ, ನಾಲ್ವರು ಅಪರಿಚಿತರು ಜೇಕಬ್ ಎಂಬುವವರನ್ನು ಅಪಹರಿಸಿ ಎಟಿಎಂ ಮೂಲಕ 45,000 ರೂ. ನಗದು ದೋಚಿದ್ದಾರೆ.
ಆರೋಪಿಗಳು ಜೇಕಬ್ ಅವರ ಕ್ರೆಡಿಟ್ ಕಾರ್ಡ್ ಬಳಸಿ ಆಗಸ್ಟ್ 20 ರಂದು 3.2 ಲಕ್ಷ ರೂಪಾಯಿಯನ್ನು ಬೇರೊಂದು ಖಾತೆಗೆ ವರ್ಗಾಯಿಸಿಕೊಂಡು ಪರಾರಿಯಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.