
ಬೆಳಗಾವಿ ಜಿಲ್ಲೆಯ ಮಹಿಳೆಯರಲ್ಲಿನ ರಕ್ತಹೀನತೆ ನಿವಾರಣೆಗೆ ಕೆಎಲ್ಇ ಸಂಸ್ಥೆಯ ಸಹಯೋಗದಲ್ಲಿ ಪೌಷ್ಟಿಕಾಂಶ ಆಹಾರ ನೀಡುವ ಅಭಿಯಾನವನ್ನು ಸದ್ಗುರು ಮಧುಸೂದನ ಸಾಯಿ ಅವರು ಮಂಗಳವಾರ ಘೋಷಿಸಿದ್ದಾರೆ.
13ನೇ ವಯಸ್ಸಿನಿಂದಲೇ ಜಿಲ್ಲೆಯ ಎಲ್ಲ ಹೆಣ್ಣುಮಕ್ಕಳಿಗೆ ಪೌಷ್ಟಿಕಾಂಶದ ಪುಡಿ (ಸಾಯಿ ಶೂರ್) ಸಿಗುವಂತೆ ಮಾಡುವ ಗುರಿ ಹೊಂದಲಾಗಿದ್ದು, ಇದಕ್ಕೆ ತಗಲುವ ವೆಚ್ಚದಲ್ಲಿ ಸಮಾಜದ ಸಹಯೋಗವನ್ನು ಕೋರಲಾಗಿದೆ.
ಕಾರ್ಯಕ್ರಮದಲ್ಲಿ ಕೆಎಲ್ಇ ಗೌರವಾಧ್ಯಕ್ಷ ಪ್ರಭಾಕರ ಕೋರೆ ಅವರು ಈ ಅಭಿಯಾನಕ್ಕೆ ಸಂಸ್ಥೆಯ ವತಿಯಿಂದ ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡಿದ್ದು, ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ.