
ಭಾರತ ಮತ್ತು ಅಮೆರಿಕ ನಡುವಿನ ಪ್ರಸ್ತಾವಿತ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಮಾತುಕತೆಗಳು ಒಂದು ಹಂತಕ್ಕೆ ಬಂದು ನಿಂತಿದ್ದು, ಅದರಿಂದ ಆಚೆಗೆ ಹೆಚ್ಚಿನ ಹೊಂದಾಣಿಕೆ ಅಸಾಧ್ಯ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ನವದೆಹಲಿಯಲ್ಲಿ ನಡೆದ ಮ್ಯೂನಿಚ್ ಲೀಡರ್ಸ್ ಸಭೆಯಲ್ಲಿ ಮಾತನಾಡಿದ ಅವರು, ಉಭಯ ದೇಶಗಳ ನಡುವಿನ ಮಾತುಕತೆ ಕಠಿಣವಾಗಿದ್ದು ಕೊಡು-ಕೊಳ್ಳುವಿಕೆ ಬಹಳ ಕಷ್ಟ ಎಂದು ಹೇಳಿದ್ದಾರೆ.
2025ರ ಫೆಬ್ರವರಿಯಲ್ಲಿ ಆರಂಭವಾದ ಈ ಒಪ್ಪಂದದ ಮಾತುಕತೆಗಳ ಅಡಿಯಲ್ಲಿ ಅಮೆರಿಕದ ಸುಂಕದ ಷರತ್ತುಗಳಿಗೆ ಸಂಬಂಧಿಸಿದ ವಿವಾದಗಳು ಇನ್ನೂ ಸಂಪೂರ್ಣ ಬಗೆಹರಿದಿಲ್ಲ.