
ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಕರಡಿಗೋಡು ಗ್ರಾಮದಲ್ಲಿ ರಾಮಪುರಂ ಕುಟುಂಬವು 2019ರಲ್ಲಿ ಖಾಸಗಿ ಶಾಲೆ ಸ್ಥಾಪಿಸಿ ಕಾರ್ಮಿಕರ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿದೆ.
ಈ ಶಾಲೆಯಲ್ಲಿ ಪ್ರೀ-ಕೆಜಿ, ಎಲ್ ಕೆಜಿ ಮತ್ತು ಯುಕೆಜಿ ತರಗತಿಗಳಲ್ಲಿ ಸುಮಾರು 90 ಮಕ್ಕಳು ಅಂತರರಾಷ್ಟ್ರೀಯ ಗುಣಮಟ್ಟದ ಶಿಕ್ಷಣ ಪಡೆಯುತ್ತಿದ್ದಾರೆ.
ಮಕ್ಕಳಿಗೆ ಸಮವಸ್ತ್ರ, ಊಟ ಮತ್ತು ಮನೆಯಂತಹ ವಾತಾವರಣದಲ್ಲಿ ಶಿಕ್ಷಣವನ್ನು ಸಂಪೂರ್ಣ ಉಚಿತವಾಗಿ ಒದಗಿಸಲಾಗುತ್ತಿದೆ.