
ಜಪಾನ್‌ನ 11 ವರ್ಷದ ಪ್ರಾಥಮಿಕ ಶಾಲಾ ವಿದ್ಯಾರ್ಥಿ ಯುಕಿ ಕುರಿಹರಾ ಏಷ್ಯನ್ ಗೇಮ್ಸ್‌ನ 'ಪುಯೋ ಪುಯೋ ಚಾಂಪಿಯನ್ಸ್' ಇ-ಸ್ಪೋರ್ಟ್ಸ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.
ಪುರುಷರ ವೈಯಕ್ತಿಕ ವಿಭಾಗದ ಫೈನಲ್‌ನಲ್ಲಿ ಯುಕಿ ಸೌತ್ ಕೊರಿಯಾದ 24 ವರ್ಷದ ಕಾಂಗ್ ಡಾಂಗ್-ಶಿನ್ ಅವರನ್ನು 10-2 ರ ಅಂತರದಿಂದ ಸೋಲಿಸಿದ್ದಾರೆ.
ಈ ಗೆಲುವಿನ ಮೂಲಕ ಯುಕಿ ಕುರಿಹರಾ 1951ರಲ್ಲಿ ಆರಂಭವಾದ ಏಷ್ಯನ್ ಗೇಮ್ಸ್ ಇತಿಹಾಸದಲ್ಲೇ ಅತ್ಯಂತ ಕಿರಿಯ ವಯಸ್ಸಿನ ಚಿನ್ನದ ಪದಕ ವಿಜೇತರೆಂಬ ದಾಖಲೆ ಬರೆದಿದ್ದಾರೆ.