
ಆಂಧ್ರಪ್ರದೇಶದ ಮದನಪಲ್ಲೆಯಲ್ಲಿ ಲೇಡಿ ಡಾನ್ ಎಂದು ಕರೆಯಲ್ಪಡುವ ಕೊನೇಟಿ ಸುಲೋಚನಾ ಅವರ ನಿವಾಸದ ಮೇಲೆ ಪೊಲೀಸರು ದಾಳಿ ನಡೆಸಿ, ಕೋಟ್ಯಂತರ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಡಿಎಸ್ಪಿ ಬುಚಿರಾಜು ನೇತೃತ್ವದ ತಂಡವು ನಡೆಸಿದ ಶೋಧದಲ್ಲಿ ನಕಲಿ ಸಹಿ ಇರುವ 50 ದಾಖಲೆಗಳು ಮತ್ತು 15 ಬಾಂಡ್ ಪೇಪರ್ಗಳು ಪತ್ತೆಯಾಗಿದ್ದು, ಇವುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಸುಲೋಚನಾ ವಿರುದ್ಧ ಮದನಪಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ 14 ಅಪರಾಧ ಪ್ರಕರಣಗಳು ದಾಖಲಾಗಿದ್ದು, ಟೂ ಟೌನ್ ಪೊಲೀಸ್ ಠಾಣೆಯಲ್ಲಿ ಆಕೆಯ ವಿರುದ್ಧ ರೌಡಿ ಶೀಟ್ ಕೂಡ ತೆರೆಯಲಾಗಿದೆ.