
ಕಚ್ಚಾ ವಸ್ತುಗಳ ಬೆಲೆ ಏರಿಕೆ ಮತ್ತು ಉತ್ಪಾದನಾ ವೆಚ್ಚದ ಕಾರಣದಿಂದ ಬಿಸ್ಕೆಟ್, ಸಾಬೂನು ಮತ್ತು ಡಿಟರ್ಜೆಂಟ್ ಸೇರಿದಂತೆ ದಿನಬಳಕೆ ವಸ್ತುಗಳ ಬೆಲೆಯನ್ನು ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಹೆಚ್ಚಿಸಲು FMCG ಕಂಪನಿಗಳು ಮುಂದಾಗಿವೆ.
ಬ್ರಿಟಾನಿಯಾ ಮತ್ತು ಡಾಬರ್ನಂತಹ ಕಂಪನಿಗಳು ಬೆಲೆ ಏರಿಕೆ ಅಥವಾ ಉತ್ಪನ್ನದ ಪ್ರಮಾಣವನ್ನು ಕಡಿಮೆ ಮಾಡುವ 'ಶ್ರಿಂಕ್ಫ್ಲೇಷನ್' ತಂತ್ರವನ್ನು ಅಳವಡಿಸಿಕೊಳ್ಳುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಜೂನ್ ತ್ರೈಮಾಸಿಕದಲ್ಲೇ ಹಲವು ಕಂಪನಿಗಳು ಬೆಲೆಯನ್ನು ಶೇ. 2ರಿಂದ 5ರಷ್ಟು ಹೆಚ್ಚಿಸಿದ್ದರೂ, ದೇಶದ ಆರ್ಥಿಕ ಬೆಳವಣಿಗೆಯಿಂದಾಗಿ ಬೇಡಿಕೆಯಲ್ಲಿ ದೊಡ್ಡ ಮಟ್ಟದ ಕುಸಿತ ಉಂಟಾಗಿಲ್ಲ ಎಂದು ಉದ್ಯಮ ವಲಯ ಅಭಿಪ್ರಾಯಪಟ್ಟಿದೆ.