
ಬಾತ್‌ರೂಮ್ ಸಿಂಕ್ ಬಳಿ ಟೂತ್‌ಬ್ರಷ್ ಇಡುವುದರಿಂದ ಅಲ್ಲಿನ ತೇವಾಂಶ ಮತ್ತು ಕಲುಷಿತ ನೀರಿನ ಕಣಗಳಿಂದ ಬ್ಯಾಕ್ಟೀರಿಯಾಗಳು ಬ್ರಷ್‌ಗೆ ವರ್ಗಾವಣೆಯಾಗಿ ಆರೋಗ್ಯಕ್ಕೆ ಹಾನಿಯಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.
ಮನೆಯ ಎಲ್ಲಾ ಸದಸ್ಯರ ಟೂತ್‌ಬ್ರಷ್‌ಗಳನ್ನು ಒಂದೇ ಕಡೆ ಇಡಬಾರದು, ಏಕೆಂದರೆ ಒಬ್ಬರ ಬಾಯಿಯ ಬ್ಯಾಕ್ಟೀರಿಯಾಗಳು ಇನ್ನೊಬ್ಬರ ಬ್ರಷ್‌ಗೆ ಹರಡುವ ಸಾಧ್ಯತೆ ಹೆಚ್ಚಿರುತ್ತದೆ.
ಟೂತ್‌ಬ್ರಷ್‌ಗಳನ್ನು ಬಾತ್‌ರೂಮ್‌ನ ಹೊರಗೆ ಒಣಗಿದ ಮತ್ತು ಗಾಳಿಯಾಡುವ ಶೆಲ್ಫ್ ಅಥವಾ ಕ್ಯಾಬಿನೆಟ್‌ನಲ್ಲಿ ಸಂಗ್ರಹಿಸಬೇಕು ಮತ್ತು ಪ್ರತಿ 3-4 ತಿಂಗಳಿಗೊಮ್ಮೆ ಬ್ರಷ್ ಬದಲಾಯಿಸುವುದು ಸೂಕ್ತ.