
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಗಜಪಯಣಕ್ಕೆ ಚಾಲನೆ ಸಿಕ್ಕಿದ್ದು, ಧನಂಜಯ, ಮಹೇಂದ್ರ, ಲಕ್ಷ್ಮೀ ಸೇರಿದಂತೆ 9 ಆನೆಗಳ ಮೊದಲ ತಂಡ ಅರಮನೆಗೆ ಆಗಮಿಸಿದೆ.
ಅರಣ್ಯ ಭವನದಲ್ಲಿ ಬೆಳಗ್ಗೆ 9.55 ರಿಂದ 10.19ರ ಶುಭ ತುಲಾ ಲಗ್ನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಆನೆಗಳು ಸಾಂಪ್ರದಾಯಿಕವಾಗಿ ಅರಮನೆ ಪ್ರವೇಶಿಸಿವೆ.
ಅರಮನೆ ಮಂಡಳಿಯಿಂದ ಅದ್ಧೂರಿ ಸ್ವಾಗತ ಪಡೆದಿರುವ ಈ ಗಜಪಡೆಯು ಮುಂದಿನ ದಿನಗಳಲ್ಲಿ ದಸರಾ ಮೆರವಣಿಗೆಗಾಗಿ ಅರಮನೆ ಆವರಣದಲ್ಲಿ ತಾಲೀಮು ನಡೆಸಲಿದೆ.