
ನ್ಯೂಝಿಲೆಂಡ್ ಎ ವಿರುದ್ಧದ ಪಂದ್ಯದ ಎರಡನೇ ಇನಿಂಗ್ಸ್ನಲ್ಲಿ ಭರ್ಜರಿ 199 ರನ್ ಗಳಿಸಿದ್ದ ದೇವದತ್ ಪಡಿಕ್ಕಲ್ ಅಂಪೈರ್ ತಪ್ಪು ತೀರ್ಪಿನಿಂದ ಔಟಾದರು.
ಚಹಾ ವಿರಾಮಕ್ಕೆ ಹತ್ತು ನಿಮಿಷಗಳಿರುವಾಗ ಝಾಕ್ ಗಿಬ್ಸನ್ ಎಸೆತದಲ್ಲಿ ಬ್ಯಾಟ್ಗೆ ಚೆಂಡು ತಾಗಿರಲಿಲ್ಲವಾದರೂ ಅಂಪೈರ್ ಔಟ್ ನೀಡಿದರು.
ಈ ವಿವಾದಾತ್ಮಕ ನಿರ್ಧಾರದಿಂದ ಪಡಿಕ್ಕಲ್ ದ್ವಿಶತಕ ವಂಚಿತರಾಗಿದ್ದು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿದೆ.