
ತಮಿಳುನಾಡು ರಾಜಕೀಯದಲ್ಲಿ ನಟರ ಪ್ರವೇಶದ ಚರ್ಚೆಗಳ ನಡುವೆ, ನಟ ಧನುಷ್ ಸದ್ಯಕ್ಕೆ ರಾಜಕೀಯಕ್ಕೆ ಬರುವುದು ಅನುಮಾನ ಎಂಬ ಮಾಹಿತಿ ಲಭ್ಯವಾಗಿದೆ.
ಪ್ರಸ್ತುತ ಧನುಷ್ ಕೈಯಲ್ಲಿ ಐದು ಸಿನಿಮಾಗಳಿದ್ದು, ಅವುಗಳ ಚಿತ್ರೀಕರಣಕ್ಕಾಗಿ ಮುಂದಿನ ಮೂರರಿಂದ ನಾಲ್ಕು ವರ್ಷಗಳ ಕಾಲ ಅವರು ಬ್ಯುಸಿಯಾಗಿರಲಿದ್ದಾರೆ.
ನವೆಂಬರ್‌ನಲ್ಲಿ ರಾಜ್‌ಕುಮಾರ್ ಪೆರಿಯಸಾಮಿ ನಿರ್ದೇಶನದ ಅವರ ಮುಂದಿನ ಸಿನಿಮಾ ‘ಓಂ’ ತೆರೆಗೆ ಬರಲು ಸಿದ್ಧವಾಗುತ್ತಿದೆ.