
ಈ ವಾರಾಂತ್ಯದಲ್ಲಿ ಚಿನ್ನದ ದರ ಗ್ರಾಮ್ಗೆ 20 ರೂಪಾಯಿ ಏರಿಕೆಯಾಗಿದೆ, ಆದರೆ ಒಟ್ಟಾರೆ ಈ ವಾರ ಚಿನ್ನದ ಬೆಲೆಯಲ್ಲಿ 345 ರೂಪಾಯಿ ಇಳಿಕೆ ಕಂಡುಬಂದಿದೆ ಎಂದು ವರದಿಯಾಗಿದೆ.
ಬೆಂಗಳೂರಿನಲ್ಲಿ 22 ಕ್ಯಾರಟ್ ಚಿನ್ನದ ದರ 10 ಗ್ರಾಮ್ಗೆ 1,35,350 ರೂಪಾಯಿಗಳಷ್ಟಿದ್ದರೆ, 24 ಕ್ಯಾರಟ್ ಅಪರಂಜಿ ಚಿನ್ನದ ದರ 1,47,660 ರೂಪಾಯಿಗಳಾಗಿವೆ.
ಬೆಳ್ಳಿ ದರವು ತುಸು ಇಳಿಕೆ ಕಂಡಿದ್ದು, ಬೆಂಗಳೂರಿನಲ್ಲಿ 100 ಗ್ರಾಮ್ ಬೆಳ್ಳಿ ಬೆಲೆ 23,000 ರೂಪಾಯಿಗಳಷ್ಟಿದೆ. ಈ ದರಗಳು ಜಿಎಸ್ಟಿ ಹಾಗೂ ಮೇಕಿಂಗ್ ಚಾರ್ಜಸ್ ಇಲ್ಲದ ಮೂಲ ಬೆಲೆಗಳಾಗಿವೆ.