
ಜರ್ಮನಿ ಮೂಲದ ಬೇಯರ್ ಸೈನ್ಸ್ ಅಂಡ್ ಇನ್ನೋವೇಶನ್ ಕಂಪನಿಯು ಬೆಂಗಳೂರು ಸಮೀಪ ಉತ್ಪಾದನಾ ಸ್ಥಾವರ ಅಭಿವೃದ್ಧಿಗೆ ₹200 ಕೋಟಿ ಹೂಡಿಕೆ ಮಾಡಲು ಸರ್ಕಾರದೊಂದಿಗೆ ಒಡಂಬಡಿಕೆಗೆ ಸಹಿ ಹಾಕಿದೆ.
ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರ ಸಮ್ಮುಖದಲ್ಲಿ ನಡೆದ ಈ ಒಪ್ಪಂದದಿಂದ ಮುಂದಿನ 7 ವರ್ಷಗಳಲ್ಲಿ 220 ಉದ್ಯೋಗಗಳು ಸೃಷ್ಟಿಯಾಗಲಿವೆ.
ಕಂಪನಿಯು ಮುಂದಿನ ವರ್ಷದ ಏಪ್ರಿಲ್‌ನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೂ ಮುನ್ನ ಯೋಜನೆಯ ಭೂಮಿಪೂಜೆ ನೆರವೇರಿಸಲು ಬಯಸಿದೆ.