
ಮೇ 1ರಿಂದ ಸ್ಥಗಿತಗೊಂಡಿದ್ದ ಶಿವಮೊಗ್ಗ-ಬೆಂಗಳೂರು ವಿಮಾನ ಸೇವೆಯನ್ನು ಸ್ಟಾರ್ ಏರ್ ಸಂಸ್ಥೆಯು ಅಕ್ಟೋಬರ್ 15ರಿಂದ ಪುನರಾರಂಭಿಸಲು ಸಿದ್ಧತೆ ನಡೆಸಿದೆ.
ಶಿವಮೊಗ್ಗದಿಂದ ಚೆನ್ನೈ ಮತ್ತು ಹೈದರಾಬಾದ್ ನಡುವಿನ ವಿಮಾನ ಸಂಪರ್ಕವು ಸೆಪ್ಟೆಂಬರ್ ತಿಂಗಳಲ್ಲೇ ಮರುಪ್ರಾರಂಭಗೊಳ್ಳಲಿದ್ದು, ಈ ಕುರಿತ ವೇಳಾಪಟ್ಟಿಯನ್ನು ಶೀಘ್ರವೇ ಪ್ರಕಟಿಸಲಾಗುವುದು.
2023ರ ಆಗಸ್ಟ್ 31ರಂದು ಮೊದಲ ಬಾರಿಗೆ ಆರಂಭವಾಗಿದ್ದ ಈ ವಿಮಾನ ಸೇವೆಯು, ಸಿಬ್ಬಂದಿ ಮತ್ತು ವಿಮಾನಗಳ ಕೊರತೆಯಿಂದಾಗಿ ಕಳೆದ ಮೂರು ತಿಂಗಳಿಂದ ಸ್ಥಗಿತಗೊಂಡಿತ್ತು.