Indian Politics
ಸಚಿವ ಸತೀಶ್ ಜಾರಕಿಹೊಳಿ ಮನೆ ಮತ್ತು ಕಚೇರಿಗಳ ಮೇಲೆ ಇಡಿ ದಾಳಿ

ಸಚಿವ ಸತೀಶ್ ಜಾರಕಿಹೊಳಿ ಮನೆ ಮತ್ತು ಕಚೇರಿಗಳ ಮೇಲೆ ಇಡಿ ದಾಳಿ

tv9kannada3h
THE BRIEF
1

ಸೆಪ್ಟೆಂಬರ್ 09 ರಂದು ಸಚಿವ ಸತೀಶ್ ಜಾರಕಿಹೊಳಿ ಅವರ ಬೆಂಗಳೂರು ಮತ್ತು ಬೆಳಗಾವಿಯ ನಿವಾಸ ಹಾಗೂ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

2

ಜಾರಕಿಹೊಳಿ ಅವರು ಎರಡು ವರ್ಷಗಳ ಹಿಂದೆ ಆಫ್ರಿಕಾದ ರುವಾಂಡಾ ಅಧಿಕಾರಿಗಳೊಂದಿಗೆ ತಮ್ಮ ಎರಡು ಶುಗರ್ ಫ್ಯಾಕ್ಟರಿಗಳ ಹೂಡಿಕೆ ಕುರಿತು ಮಾತುಕತೆ ನಡೆಸಿದ್ದು, ಈ ವಿದೇಶಿ ಹೂಡಿಕೆಯ ಹಿನ್ನೆಲೆಯಲ್ಲಿ ದಾಳಿ ನಡೆದಿದೆ ಎಂದು ಶಂಕಿಸಲಾಗಿದೆ.

3

ಸಚಿವರು ಈ ಹಿಂದೆ ಎರಡ್ಮೂರು ಬಾರಿ ರುವಾಂಡಾಕ್ಕೆ ಭೇಟಿ ನೀಡಿದ್ದ ಬೆಳವಣಿಗೆಗಳ ನಡುವೆಯೇ ಈ ಇಡಿ ದಾಳಿ ನಡೆದಿದ್ದು, ರಾಜ್ಯ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ.