
ಕೇರಳದ ಸನೀದ್ ಎಂಬ ಯುವಕ ಮಾದಕವ್ಯಸನದ ವಿರುದ್ಧ ಜಾಗೃತಿ ಮೂಡಿಸಲು ಮುಂಭಾಗದ ಚಕ್ರವಿಲ್ಲದ ಸೈಕಲ್‌ನಲ್ಲಿ 11,000 ಕಿಲೋಮೀಟರ್ ದೂರದ ನೇಪಾಳದ ಎವರೆಸ್ಟ್ ಬೇಸ್ ಕ್ಯಾಂಪ್ ತಲುಪುವ ಗುರಿ ಹೊಂದಿದ್ದಾರೆ.
ಸನೀದ್ ತಮ್ಮ ಒಂಟಿ ಚಕ್ರದ ಸೈಕಲ್ ಯಾನದ ಮೂಲಕ ಕೇರಳದಿಂದ ಹೊರಟು ತಮಿಳುನಾಡಿನ ತಿರುಚ್ಚಿರಾಪಳ್ಳಿ ಮೂಲಕ ಸಾಗುತ್ತಿರುವುದು ಗಮನ ಸೆಳೆದಿದೆ.
ಸಿವಿಲ್ ಇಂಜಿನಿಯರಿಂಗ್ ಮತ್ತು ಇಂಟೀರಿಯರ್ ಡಿಸೈನಿಂಗ್ ವ್ಯಾಸಂಗ ಮಾಡಿರುವ ಸನೀದ್, 12 ವರ್ಷಗಳಿಂದ ವೃತ್ತಿಪರ ಬೈಕ್ ಸ್ಟಂಟ್ ಪರ್ಫಾರ್ಮರ್ ಆಗಿ ಭಾರತೀಯ ಸೇನಾ ಸಿಬ್ಬಂದಿಗೂ ತರಬೇತಿ ನೀಡಿದ್ದಾರೆ.