
ದೆಹಲಿಯಲ್ಲಿ 31 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್ ವಿನಯ್ ಗುಪ್ತಾ ಅವರನ್ನು ಪತ್ನಿಯ ಕುಟುಂಬದವರು ಹಲ್ಲೆ ನಡೆಸಿ ಹತ್ಯೆ ಮಾಡಿದ್ದು, ಈ ಸಂಬಂಧ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ನೋಯ್ಡಾದ ಅಡೋಬ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ವಿನಯ್ ಅವರ ವಾರ್ಷಿಕ ವೇತನ 60 ಲಕ್ಷ ರೂ. ಆಗಿದ್ದು, ಮಕ್ಕಳ ಔಷಧದ ವಿಷಯದಲ್ಲಿ ನಡೆದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿದೆ.
ಪತ್ನಿ ರೇಖಾ ಮತ್ತು ಆಕೆಯ ಕುಟುಂಬದವರು ಸಿಸಿಟಿವಿ ಕ್ಯಾಮೆರಾಗಳನ್ನು ಆಫ್ ಮಾಡಿ ವಿನಯ್ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಮೃತರ ಕುಟುಂಬ ಆರೋಪಿಸಿದೆ.